ನೀರು
ಇವತ್ತು ಬೆಳಿಗ್ಗೆ ವಾಕ್ ಹೋಗುವಾಗ ಒಂದು ದೊಡ್ಡ ಮನೆಯ ಮುಂದೆ ಉದ್ದನೆಯ ಪೈಪೊಂದರಲ್ಲಿ ನೀರನ್ನು ದಾರಿಯುದ್ದಕ್ಕೂ ಬಿಡುತ್ತಿ ಬಿಡುತ್ತಿದ್ದರು
ಮನೆಯ ಮಾಲೀಕ ಇರಬಹುದು, ಅವರು ನೀರನ್ನು ಹಾಳು ಮಾಡುತ್ತಿರುವುದನ್ನು ನೋಡಿ, ನನ್ನ ಮನಸ್ಸು ಸ್ವಲ್ಪ ಕಸಿವಿಸಿ ಗೊಂಡಿತು. ನೀರಿನ ಬೆಲೆ ಗೊತ್ತಿಲ್ಲದವರು ಬೋರ್ವೆಲ್ ಹಾಕಿಸಿಕೊಂಡು ಭೂಮಿಯಲ್ಲಿರುವ ನೀರನ್ನು ಹೇಗೆ ಬೇಕೋ ಹಾಗೆ ಉಪಯೋಗಿಸುತ್ತಾರೆ, ಬೋರ್ವೆಲ್ ಎಷ್ಟು ಜನ ಹಾಕುತ್ತಾರೆ, ಹೀಗೆ ಜನರೆಲ್ಲಾ ತಮ್ಮ ಸ್ವಾರ್ಥಕ್ಕಾಗಿ ಬೋರ್ವೆಲ್ ತೆಗೆಸಿ ಕೊನೆಗೊಂದು ದಿನ ಭೂಮಿ ಒಳಗಿಂದಲೂ ನೀರು ಸಿಗದಂತೆ ಆಗಬಹುದೇನೋ ಆ ದೇವರೇ ಬಲ್ಲ.
ಹಿಂದೆ ಎಲ್ಲರೂ ನೀರಿಗಾಗಿ ನದಿ ಅಥವಾ ಬಾವಿಗೆ ಮೊರೆಹೋಗುತ್ತಿದ್ದರು. ಈಗಂತೂ ನಮ್ಮ ನದಿಗಳು ಹೆಸರು ಕೇಳದಂತೆ ಮಾಯವಾಗಿವೆ. ಬೆಂಗಳೂರಿನ ವೃಷಭಾವತಿ ನದಿ ಈಗ ಬೆಂಗಳೂರು ನಗರದ ಗಲೀಜನ್ನು ಹರಿಸಿಕೊಂಡು ಚರಂಡಿಯಾಗಿ ಹರಿಯುತ್ತಿದೆ. ಇಂದಿನ ವೇಗದ ಜೀವನದಲ್ಲಿ ನಾವು ಎಷ್ಟು ಸ್ವಾರ್ಥಿಗಳು ಆಗಿದ್ದೇವೆ. ಎಷ್ಟೋ ಜನಕ್ಕೆ ಬೆಂಗಳೂರಿನಲ್ಲಿ ಹಿಂದೊಮ್ಮೆ ನದಿಯು ಇದ್ದಿದ್ದು ನಿಜವೇ ಅನ್ನುವಷ್ಟು ವೃಷಭಾವತಿ ನದಿ ಹಾಳಾಗಿದೆ.
ಕರ್ನಾಟಕದ ಜನಸಂಖ್ಯೆ ಕೋಟಿ ಕೋಟಿ, ಬೆಂಗಳೂರಿನಲ್ಲಿ ಒಬ್ಬನಲ್ಲಿ ಕೂಡ ಯೋಚನೆ ಬರಲಿಲ್ಲವೇ, ನಾಳೆ ದಿನ ನಾವು ನಮ್ಮ ನೆರಳಂತೆ ಮಕ್ಕಳನ್ನು ಬಿಟ್ಟು ಹೋಗುತ್ತೇವೆ ಅವರಿಗಾದರೂ ಒಳ್ಳೆಯ ಗಾಳಿ ಬೆಳಕು ಮತ್ತುನೀರು ಬೇಡವೇ.
ಆಸ್ತಿ ದುಡ್ಡು ಮಾಡಿಟ್ಟರೆ ದುಡ್ಡನ್ನು ತಿನ್ನಲಿಕ್ಕೆ ಆಗುತ್ತದೆಯೇ ಅಥವಾ ಕುಡಿಯಲಿಕ್ಕೆ ಆಗುತ್ತದೆಯಾ.
ಜನ ಬೇರೆ ರಾಜ್ಯಗಳಿಂದ ವಲಸೆ ಬರುತ್ತಾರೆ ಆದರೆ ಶೇಕಡ ನೂರರಲ್ಲಿ 30 ಶೇಕಡ ಜನರು ಇದು ತಮ್ಮ ರಾಜ್ಯವೆಂದು ತಿಳಿದು ಇದನ್ನು ಸ್ವಚ್ಛವಾಗಿಡಲು ಬಯಸುತ್ತಾರೆ ಆದರೆ 70 ಪರ್ಸೆಂಟ್ ಜನ
ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನದಿಯಲ್ಲಿ ಪ್ಲಾಸ್ಟಿಕ್ ಎಸೆಯುವುದರಿಂದ ಮತ್ತು ಕಸವನ್ನು ಎಸೆಯುವುದರಿಂದ ಹಿಂದೆ ಬೀಳುವುದಿಲ್ಲ ನೂರು ವರ್ಷ ನಾವು ಈ ಭೂಮಿ ಮೇಲೆ ಇರುತ್ತೇವೆ ಎಂದು ತಿಳಿದಿರಬಹುದು. ನಮ್ಮ ಮುಂದಿನ ಪೀಳಿಗೆಯ ಬಗ್ಗೆ ಯೋಚಿಸುವುದೇ ಇಲ್ಲ.
ಕಾರು ಮತ್ತು ಬಸ್ಸುಗಳಲ್ಲಿ ಹೋಗುವಾಗ ರಪ್ಪೆಂದು ಪ್ಲಾಸ್ಟಿಕ್ ಚೀಲಗಳನ್ನು ಹೊರಗೆ ಹಾಕುತ್ತಾರೆ ಹಾರಾಡಿ ಹೋಗಿ ನದಿಗಳನ್ನು ಸೇರುತ್ತದೆ ಬಹಳ ಕಡೆ ನದಿ ಹತ್ತಿರವೆ ಪ್ಲಾಸ್ಟಿಕ್ ಬಾಟಲ್ ಗಳು ಪ್ಲಾಸ್ಟಿಕ್ ಚೀಲಗಳನ್ನು ನೋಡುತ್ತೇವೆ ಅಲ್ಲಿ ಸುತ್ತುವರೆದ ಜನರಲ್ಲಿ ಒಬ್ಬನಾದರೂ ಪ್ಲಾಸ್ಟಿಕ್ ಎಸೆಯಬಾರದು ಯೋಚನೆ ಮಾಡಿದ್ದಿದ್ದರೆ ಅದರ ಪರಿಣಾಮವೇ ಬೇರೆಯಾಗುತ್ತಿತ್ತು.
ಚಿಕ್ಕಂದಿನಲ್ಲಿ ನನ್ನ ತಾಯಿ ಮತ್ತು ಅಜ್ಜಿ ಪಾತ್ರೆ ತೊಳೆಯುವಾಗ ನೀರನ್ನು ಚಿಕ್ಕದಾಗಿ ಬಿಡಬೇಕು ನೀರು ತುಂಬಾ ಅಮೂಲ್ಯವಾದದ್ದು ಎಂದು ಹೇಳಿ ಹೇಳಿ ಹೇಳುತ್ತಿದ್ದರು, ಆಗ ಅರ್ಥವಾಗದ ಮಾತು ಇಂದು ಅವರು ಹೇಳಿದ್ದು ಎಷ್ಟು ಸತ್ಯ ಎನಿಸುತ್ತದೆ, ನನ್ನ ಅಜ್ಜಿ ಅಕ್ಕಿ ತೊಳೆದ ನೀರು, ಸೊಪ್ಪು ತೊಳೆದ ನೀರನ್ನು ಕೂಡ ಗಿಡಗಳಿಗೆ ತೆಗೆದುಕೊಂಡು ಹಾಕುತ್ತಿದ್ದರು, ಚಿಕ್ಕವಳಿದ್ದಾಗ ಯೋಚಿಸಿದ್ದುಂಟು ಇವರು ಯಾಕೆ ಇಷ್ಟೊಂದು ನೀರನ್ನು ಹಾಳು ಮಾಡಬಾರದು ಅಂತ ಹೇಳುತ್ತಾರೆ ಎಂದು.
ನನ್ನ ಅಜ್ಜಿಯ ಹಾಗೆ ನನ್ನ ಅಮ್ಮ ಕೂಡ ನೀರನ್ನು ಎಂದು ತ್ಯಜ ಮಾಡಿದ್ದಿಲ್ಲ ಎಷ್ಟೋ ಬಾರಿ ಅವರು ಗಳು ಹೇಳಿದ ಮಾತು ಇನ್ನೂ ನೆನ್ನೆ ಮೊನ್ನೆ ಹೇಳಿದ ಹಾಗಿದೆ. ಇಂದು ಕೂಡ ಅಮ್ಮನ ಮನೆಗೆ ಹೋದಾಗ ಚಿಕ್ಕದಾಗಿ ನೀರು ಬಿಟ್ಟುಕೊಂಡು ಪಾತ್ರೆ ತೊಳಿಬೇಕು ಅನ್ನೋ ಮಾತನ್ನು ಕೇಳಿಸಿಕೊಳ್ಳದೆ ಇರುವುದಿಲ್ಲ.
ನಾವು ಎಷ್ಟು ಜನ ನಮ್ಮ ಮಕ್ಕಳಿಗೆ ಇಂದು ಹೇಳಿಕೊಡುತ್ತೇವೆ ಹೀಗೆ ನಡೆದುಕೊಳ್ಳಬೇಕು ಅಂತ ಬಹುಶಃ ಬಹಳ ಕಡಿಮೆ, ಇಂದಿನ ಪೀಳಿಗೆ ನೀರು ಸೇದುವ ಕಷ್ಟವನ್ನು ಪಟ್ಟಿಲ್ಲ ಎಲ್ಲಿನೋಡಿದರಲ್ಲಿ ಮನೆಯಲ್ಲಿ ಕೊಳಾಯಿ ಎಷ್ಟು ಬೇಕೋ ಅಷ್ಟು ನೀರು ಉಪಯೋಗಿಸಬಹುದು ಮಕ್ಕಳಿಗೆ ನೀರು ಎಲ್ಲಿಂದ ಬರುತ್ತದೆ ಅಂತ ಕೂಡ ಗೊತ್ತಿಲ್ಲದಿರಬಹುದು.
ಬಹಳ ರಾಜ್ಯಗಳಲ್ಲಿ, ರಾಜ್ಯ ಏಕೆ...... ಬೆಂಗಳೂರಿನ ಎಷ್ಟು ಪ್ರದೇಶಗಳಲ್ಲಿ ನೀರಿನ ಕೊರತೆ ಇರುವುದು ಎಲ್ಲರಿಗೂ ತಿಳಿದಿಲ್ಲ. ನೀರನ್ನು ಬಳಸುವಾಗ ಯಾರೊಬ್ಬರೂ ಯೋಚಿಸುವುದಿಲ್ಲ, ಇಂದು ನನಗೆ ನೀರಿದೆ ನಾಳೆ ಏನು ಕಥೆ ಅಂತ ಎಷ್ಟು ಜನ ಯೋಚಿಸುತ್ತಾರೆ.
ಹಲವು ಕಡೆ ನಾನು ನೋಡಿದ್ದೇನೆ, ಹೋಟೆಲ್ ಇರಬಹುದು ಅಥವಾ ಕೆಲವು ಕಡೆ ನೀರು ನಲ್ಲಿಗಳಿಂದ ನೀರು ಸೋರುತ್ತಿದ್ದರೆ ಹೋಟೆಲಿನ ಮಾಲಿಕ ತಲೆಕೆಡಿಕೊಂಡಿದ್ದೆ ನೋಡಲಿಲ್ಲ. ನಾನು ಹೋಗಿ ನೋಡಿ ನೀರು ಸೋರುತ್ತಿದೆ ದಯವಿಟ್ಟು ನಿಮ್ಮ ಕೊಳಾಯಿ ಯನ್ನು ರಿಪೇರಿ ಮಾಡಿಸಿ ಅಂತ ಹೇಳಿ ಬಂದಿದ್ದು ಉಂಟು.
ನಾನು ನನ್ನ ಅಪಾರ್ಟ್ಮೆಂಟ್ ನಲ್ಲಿರುವ ನನ್ನ ಪಕ್ಕದ ಮನೆಯವರಿಗೆ ಕೂಡ ನೀರು ಬಿಟ್ಟುಕೊಂಡು ಬಟ್ಟೆಯನ್ನು ಒಗೆಯ ಬೇಡಿ ಎಂದು ಹೇಳಿದ್ದೆ.
ನೀರಿನ ಕಷ್ಟ ಪಟ್ಟ ವನಿಗೆ ಗೊತ್ತು, ಇಲ್ಲಿ ನಮಗೆ ಕೂದಲು ತೊಳೆಯುವುದಕ್ಕೂ ಶವರ್ ಬೇಕು, ನಮ್ಮ ವಾಹನ ತೊಳೆಯುವುದಕ್ಕೂ ಟ್ಯಾಂಕ್ ಗಟ್ಟಲೆ ನೀರು ಬೇಕು.
ಆದರೆ ಹೊರಗಡೆ ಎಷ್ಟೋ ಜನ ದಿನಕ್ಕೆ ಕೆಲವೇ ಬಕೆಟ್ ಗಳಷ್ಟು ನೀರನ್ನು ಉಪಯೋಗಿಸಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.
ಹೀಗೆ ಮೈಸೂರಿನಿಂದ ಬರುವಾಗ ನನ್ನ ಸಂಬಂಧಿ ಪೂಜೆಯ ಮಾಡಿದ ಹೂವುಗಳನ್ನು ಶ್ರೀರಂಗಪಟ್ಟಣದ ನದಿಯಲ್ಲೇ ಹಾಕಬೇಕೆಂದು ಹಾಕಿದರು, ನನಗೋ ಕಸಿವಿಸಿ ಹಾಗೂ ಹೇಳಿಯೇ ಬಿಟ್ಟೆ ನಾವು ಎಷ್ಟು ನಮ್ಮ ನದಿಗಳನ್ನು ಮಲಿನಗೊಳಿಸುತ್ತಿದ್ದೇವೆ ಅಲ್ವಾ ಆದರೆ ಆದರೆ ಅಲ್ಲಿಂದ ಯಾವ ಪ್ರತಿಕ್ರಿಯೆ ಬರಲಿಲ್ಲ ನಾವು ಚಿಕ್ಕಂದಿನಿಂದ ನೀರನ್ನು ಅಚ್ಚುಕಟ್ಟಾಗಿ ಬಳಸಬೇಕು ಹಾಗೂ ನದಿಯ ಹತ್ತಿರಹೋದಾಗ ಅದನ್ನು ಮಾಲಿನ್ಯ ಮಾಡಬಾರದು ಎಂದೆಲ್ಲ ಓದುತ್ತೇವೆ, ಆದರೆ ಬೆಳೆಯುತ್ತ ಬೆಳೆಯುತ್ತ ಅದನ್ನು ಮರೆತೇ ಬಿಡುತ್ತೇವೆ. ಯಾರಿಗಾದರೂ ಮನಸಲ್ಲಿ ಬಂದಿದ್ದು ಉಂಟೆ, ನಾಳೆ ನನ್ನ ಮಕ್ಕಳಿಗೆ ನೀರು ಇರುವುದೇ ಎಂದು?
ಕೆಲವೊಮ್ಮೆ ಬಿಸಿಲಲ್ಲಿ ಹೋಗುವಾಗ ಬಾಯಾರಿದಾಗ ನೀರಿನ ಬೆಲೆ ಗೊತ್ತಾಗುತ್ತದೆ. ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಆದಷ್ಟು ನೀರನ್ನು ನೋಡಿ ಬಳಸೋಣ. ಎಲ್ಲಿಯಾದರೂ ಹೋದಾಗ ನಲ್ಲಿ ಇಂದ ನೀರು ಸೋರುತ್ತಿದ್ದರೆ ದಯವಿಟ್ಟು ಅಲ್ಲಿಯ ಮೇಲ್ವಿಚಾರಕರಿಗೆ ತಿಳಿಸಿ ಅದನ್ನು ರಿಪೇರಿ ಮಾಡಿಸಿ ಹೇಳಿ ಬನ್ನಿ
ಎಲ್ಲಾದರೂ ಹೋದಾಗ ನಮಗೆ ಎಷ್ಟು ಬೇಕೋ ಅಷ್ಟು ನೀರನ್ನು ಮಾತ್ರ ತೆಗೆದುಕೊಳ್ಳಿ ಹೋಟೆಲ್ ಇರಬಹುದು ಆದರೆ ಯಾರ ಮನೆಯೇ ಇರಬಹುದು ದಯವಿಟ್ಟು ನೀರನ್ನು ಹಾಳುಮಾಡದಿರಿ.
ಈಗಿನ ರಿವರ್ಸ್ ಆಸ್ಮೊಸಿಸ್,
ನೀರನ್ನು ಫಿಲ್ಟರ್ ಮಾಡುವಾಗ ಬಹಳ ನೀರನ್ನು ಹೊರಗೆ ಹಾಕುತ್ತದೆ. ಹೊರಗೆ ಹಾಕಿದ ನೀರನ್ನು ಕೂಡ ಶೇಖರಿಸಿ ನಾವು ಅದನ್ನು ಉಪಯೋಗಿಸಿಕೊಳ್ಳಬಹುದು ಆದರೆ ಬಹಳ ಜನರಿಗೆ ನೀರನ್ನು ಶೇಖರಿಸುವುದು ಬೇಸರದ ಕೆಲಸ.
ನನ್ನ ಮನೆಯಲ್ಲಿ ನಾವು ರಿವರ್ಸ್ ಆಸ್ಮೋಸಿಸ್ ಫಿಲ್ಟರ್ ಹೊರಗೆ ಹಾಕಿದ ನೀರಿನಿಂದ ಮನೆ ಒರೆಸುವುದು ಮತ್ತು ಪಾತ್ರೆ ತೊಳೆಯುವುದಕ್ಕೆ ಕೂಡ ಉಪಯೋಗಿಸಬಹುದು
ನದಿ ಮತ್ತು ಸಮುದ್ರದ ಹತ್ತಿರ ಹೋದಾಗ. ನದಿಯ ಒಳಗೆ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಏನನ್ನು ಎಸೆಯದೆ ನಮ್ಮ ನದಿಯನ್ನು ಸ್ವಚ್ಛವಾಗಿರಿಸಿ ಕೊಳ್ಳೋಣ
ಆದಷ್ಟು ನೀರನ್ನು ಬಳಸುವಾಗ ಎಚ್ಚರಿಕೆಯಿಂದ ಬಳಸೋಣ.
Very true.. and agree. I too think how to overcome with this issue...
ReplyDeleteಹೌದು ನಿಮ್ಮ ಕಳಕಳಿ ನನ್ನವೂ ಕೂಡ. ಚೆಂದ ಬರೆದಿದ್ದೀರಿ
ReplyDelete