Posts

Showing posts from March, 2021

ನೀರು

Image
  ಇವತ್ತು  ಬೆಳಿಗ್ಗೆ ವಾಕ್ ಹೋಗುವಾಗ ಒಂದು ದೊಡ್ಡ ಮನೆಯ ಮುಂದೆ ಉದ್ದನೆಯ ಪೈಪೊಂದರಲ್ಲಿ ನೀರನ್ನು ದಾರಿಯುದ್ದಕ್ಕೂ ಬಿಡುತ್ತಿ ಬಿಡುತ್ತಿದ್ದರು ಮನೆಯ ಮಾಲೀಕ ಇರಬಹುದು,  ಅವರು ನೀರನ್ನು ಹಾಳು ಮಾಡುತ್ತಿರುವುದನ್ನು ನೋಡಿ, ನನ್ನ ಮನಸ್ಸು ಸ್ವಲ್ಪ ಕಸಿವಿಸಿ ಗೊಂಡಿತು. ನೀರಿನ ಬೆಲೆ ಗೊತ್ತಿಲ್ಲದವರು ಬೋರ್ವೆಲ್ ಹಾಕಿಸಿಕೊಂಡು ಭೂಮಿಯಲ್ಲಿರುವ ನೀರನ್ನು ಹೇಗೆ ಬೇಕೋ ಹಾಗೆ ಉಪಯೋಗಿಸುತ್ತಾರೆ, ಬೋರ್ವೆಲ್ ಎಷ್ಟು ಜನ ಹಾಕುತ್ತಾರೆ, ಹೀಗೆ ಜನರೆಲ್ಲಾ ತಮ್ಮ  ಸ್ವಾರ್ಥಕ್ಕಾಗಿ ಬೋರ್ವೆಲ್ ತೆಗೆಸಿ ಕೊನೆಗೊಂದು ದಿನ ಭೂಮಿ ಒಳಗಿಂದಲೂ ನೀರು ಸಿಗದಂತೆ ಆಗಬಹುದೇನೋ ಆ ದೇವರೇ ಬಲ್ಲ.  ಹಿಂದೆ ಎಲ್ಲರೂ ನೀರಿಗಾಗಿ ನದಿ ಅಥವಾ ಬಾವಿಗೆ ಮೊರೆಹೋಗುತ್ತಿದ್ದರು. ಈಗಂತೂ ನಮ್ಮ ನದಿಗಳು ಹೆಸರು ಕೇಳದಂತೆ ಮಾಯವಾಗಿವೆ.  ಬೆಂಗಳೂರಿನ ವೃಷಭಾವತಿ ನದಿ ಈಗ  ಬೆಂಗಳೂರು ನಗರದ ಗಲೀಜನ್ನು ಹರಿಸಿಕೊಂಡು ಚರಂಡಿಯಾಗಿ ಹರಿಯುತ್ತಿದೆ. ಇಂದಿನ ವೇಗದ ಜೀವನದಲ್ಲಿ ನಾವು ಎಷ್ಟು  ಸ್ವಾರ್ಥಿಗಳು  ಆಗಿದ್ದೇವೆ. ಎಷ್ಟೋ ಜನಕ್ಕೆ  ಬೆಂಗಳೂರಿನಲ್ಲಿ  ಹಿಂದೊಮ್ಮೆ ನದಿಯು ಇದ್ದಿದ್ದು  ನಿಜವೇ ಅನ್ನುವಷ್ಟು ವೃಷಭಾವತಿ ನದಿ ಹಾಳಾಗಿದೆ.     ಕರ್ನಾಟಕದ ಜನಸಂಖ್ಯೆ ಕೋಟಿ ಕೋಟಿ,  ಬೆಂಗಳೂರಿನಲ್ಲಿ ಒಬ್ಬನಲ್ಲಿ ಕೂಡ ಯೋಚನೆ ಬರಲಿಲ್ಲವೇ,  ನಾಳೆ ದಿನ ನಾವು ನಮ್ಮ ನೆರಳಂತೆ ...