ಅನ್ನ ಕೊಟ್ಟ ಭಾಷೆ

 ಎಂದಿನಂತೆ ನನ್ನ ಯೋಗ ತರಬೇತಿ ಮುಗಿಸಿ ಬರುವಾಗ ನನ್ನ ಗೆಳತಿಗೆ ಇಂದು ಚಿತ್ರಕಲಾ ಪರಿಷತ್ ಗೆ ಹೋಗೋಣವೆಂದರೆ ಯಥಾಪ್ರಕಾರ  ನಕಾರವೆ ಬಂದಿದ್ದು, ಹೋಗಲಿ ಹೂಕುಂಡ ತೆಗೆದುಕೊಂಡು ಹೋಗೋಣ ಅಂತ ಹೇಳಿದೆ, ಸರಿ ಎಂದು ಒಪ್ಪಿದರು ಮನೆಯ ಹತ್ತಿರವೇ ಒಂದು ಪುಟ್ಟ (ಸಸಿಕಟ್ಟುವ ಸ್ಥಳ) ನರ್ಸರಿಗೆ ಹೋದೆವು.  ಅಲ್ಲಿ ತರಾವರಿ ಹೂಕುಂಡ ಗಳಿದ್ದವು ಅಲ್ಲಿ ಬಂದಿಳಿದಾಗ ಸುಮಾರು ಇಪ್ಪತ್ತೈದು ವರ್ಷದ ಹುಡುಗ ಹೊರಗೆ ಬಂದ,  ನಾನು ಕನ್ನಡ- ಹಿಂದಿ ಅಂತ ಕೇಳಿದೆ... ಏಕೆಂದರೆ ಮಾತನಾಡಲು ಶುರು ಮಾಡಿದಮೇಲೆ ಕನ್ನಡ ಬರಲ್ಲ ಎನ್ನುವವರು ಬಹುಮಂದಿ ಆದ್ದರಿಂದ ಮೊದಲೇ ಖಾತ್ರಿಪಡಿಸಿಕೊಳ್ಳಲು ಕೇಳಿದೆ.   ಆ ಹುಡುಗನು ಕನ್ನಡ ಆದರೂ ಪರವಾಗಿಲ್ಲ ಎಂದು ಕನ್ನಡವನ್ನು ಮುತ್ತಿನಂತೆ ಮಾತನಾಡಿದನು, ನಾನು ಕಕ್ಕಾಬಿಕ್ಕಿ. 

ನನಗೆ ಜನಗಳ ಬಗ್ಗೆ ತಿಳಿಯಲು ಬಲು ಕಾತುರ  ಅವನನ್ನು ಉದ್ದೇಶಿಸಿ, ಕನ್ನಡ ಹೇಗೆ ಬರುತ್ತೆ? ನೀನು ಎಲ್ಲಿಂದ ಬಂದಿರುವುದು? ಅಂದಾಗ ನಾನು ಲಕ್ನೋ ಇಂದ ಬಂದಿರುವೆ,  ನನ್ನದು ಅಪ್ಪ ಅಮ್ಮ ನಾಲ್ಕು ಜನ ಅಣ್ಣ ತಮ್ಮಂದಿರು ಮತ್ತು ಇಬ್ಬರು ತಂಗಿಯರನ್ನು ಒಡಗೂಡಿದ ಸಂಸಾರ ಐದು ವರ್ಷದಿಂದ ನಾನು ಇಲ್ಲಿ ವ್ಯಾಪಾರದಲ್ಲಿ ತೊಡಗಿರುವ  ತಂದೆ ತಾಯಿಗೆ ಹಣವನ್ನು ಕಳಿಸುತ್ತೇನೆ ಎಂದನು.

ನಾನು ಅವನನ್ನು ಪ್ರಶಂಸಿಸುತ್ತಾ ಕನ್ನಡ ತುಂಬಾ ಚೆನ್ನಾಗಿ  ಮಾತನಾಡುತ್ತಿರುವೆ, ಹೇಗೆ ಎಂದಾಗ, 5 ವರ್ಷಗಳಿಂದ ಈ ವ್ಯವಹಾರದಲ್ಲಿ  ತೊಡಗಿರುವೆ ಮೇಡಂ, ಅನ್ನ ಕೊಟ್ಟ ಭಾಷೆ ಮಾಡದಿರುವುದೇ  ಕಲಿಯದೆ ಇರುವುದೇ ಮನಸ್ಸಿದ್ದರೆ ಏನು ಬೇಕಾದರೂ ಕಲಿಬಹುದು ಮೇಡಂ  ಎಂದಾಗ ನನಗೆ ತುಂಬಾ ಸಂತೋಷವಾಯಿತು.

ನನ್ನ ಅಪಾರ್ಟ್ಮೆಂಟಿನ ಇರುವ ನೂರ ಐವತ್ತು ಮನೆಗಳಲ್ಲಿ ವಾಸವಾಗಿರುವ ಉತ್ತರ ಭಾರತದ ಹಲವು ಕಡೆಯಿಂದ ಬಂದು ಇಲ್ಲಿ ನೆಲೆಸಿರುವ ಇವರ ಬಗ್ಗೆ ನೆನಪಾಯಿತು,  ಯಾರನ್ನು ಎಂದಾದರೂ ಮಾತನಾಡಿಸಲು ಹೋದರೆ ನನಗೆ ಕನ್ನಡ ಬರುವುದಿಲ್ಲ ಎಂದು ಹೇಳುತ್ತಾರೆ ಹೊರತು ಕನ್ನಡ ಕಲಿಯುವ ಪ್ರಯತ್ನವಂತೂ ಮಾಡುವುದಿಲ್ಲ.  ಇಪ್ಪತ್ತು ವರ್ಷಗಳಿಂದ ಕರ್ನಾಟಕದಲ್ಲಿದ್ದು ಕನ್ನಡ  ಬರುವುದಿಲ್ಲ ಎನ್ನುತ್ತಾರೆ ಹೊರತು ಕನ್ನಡ ಕಲಿಯುವ  ಪ್ರಯತ್ನವೇ ಮಾಡುವುದಿಲ್ಲ, ಎಷ್ಟು ಸಲ ಮನೆಯ ಕೆಲಸಕ್ಕೆ ಬರುವವರು ಕನ್ನಡಿಗರ ಮನೆಗೆ ಮಾತನಾಡಿ ಭಾಷಾಂತರಿಸಲು ವಿನಂತಿಸುತ್ತಾರೆ. 

ನಾವು ಕನ್ನಡಿಗರು ಎಲ್ಲ ಭಾಷೆಯನ್ನು  ಕಲಿತುಕೊಂಡು ಅವರ ಭಾಷೆಯಲ್ಲಿ ಮಾತನಾಡಿಸುತ್ತೇವೆ, ಹಾಗಾಗಿ ಅವರಿಗೆ ಕಲಿಯಯಬೇಕೆಂಬ ಹಂಬಲವೇ ಇರುವುದಿಲ್ಲ,  ಇಲ್ಲಿ ಬಂದು ನೆಲೆಸಿ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುವವರಿಗೆ ಕನ್ನಡ ಕಲಿಯಬೇಕೆಂಬ ಆಸೆಯ ಬರುವುದಿಲ್ಲವೇ.  ಈ ಹುಡುಗನ ಮಾತು ಕೇಳಿ ಬಹಳ ಸಂತೋಷವಾಯಿತು ಇದರ ಬಗ್ಗೆ ಬರೆಯುತ್ತೇನೆ ನಿನ್ನ ಉದಾಹರಣೆಗೆ ಕೊಡುತ್ತೇನೆ ಎಂದು ಅವನಿಗೆ ಹೇಳಿದೆ.

 ಅವನ ವ್ಯವಹಾರದ ಚಾಣಾಕ್ಷತನವನ್ನು ನೋಡಿ ಅಂದುಕೊಂಡೆ ಯಾವ ದೇಶ ವಾದರೇನು ಬದುಕಲು ನೂರಾರು ದಾರಿಗಳಿವೆ ಮನಸ್ಸಿದ್ದರೆ ಎಲ್ಲವನ್ನು ಗೆಲ್ಲಬಹುದು

 ಭಾಷೆ, ನೆಲ ಜನ ಯಾವುದು ಅಡ್ಡ ಬರುವುದಿಲ್ಲ, ಇಲ್ಲಿಯೇ ಯಾವುದೋ ಜಾಗವನ್ನು ತೆಗೆದುಕೊಂಡು ಬಾಡಿಗೆ ಕಟ್ಟಿಕೊಂಡು,  ತಾನು ಅಡುಗೆ ಬೇಯಿಸಿಕೊಂಡು, ಎಂಟು ವರ್ಷಗಳಿಂದ ದುಡಿದು ಈಗ ಫ್ಲೈಟಿನಲ್ಲಿ ಓಡಾಡುವಷ್ಟು ಬೆಳೆದಿದ್ದಾನೆ. 

 ಇಂದಿನ ಮಕ್ಕಳಿಗೆ ನಾವೆಲ್ಲ ಸೌಲಭ್ಯಗಳನ್ನು  ಒದಗಿಸುತ್ತೇವೆ ಮಕ್ಕಳಿಗೆ ಯಾವುದನ್ನು ಕಲಿಯಲಿಕ್ಕೆ ಕಷ್ಟವಲ್ಲ ಎಂದು ತಿಳಿಹೇಳಬೇಕು ಹುಡುಗನಿಂದ  ಎರಡು  ಪಾಠಗಳನ್ನು ಕಲಿತೆ. 

 ಮೊದಲನೆಯದು  ಮನಸ್ಸಿದ್ದರೆ ಏನು ಕಲಿಯುವುದು ಕಷ್ಟವಲ್ಲ

 ಮತ್ತೊಂದು ಕಾಲಮೇಲೆ ನಿಲ್ಲಲು ಯಾವುದೇ ಕೆಲಸವಾಗಿರಬಹುದು  ನಿಷ್ಠೆಯಿಂದ ಮಾಡಿದರೆ ಗೆದ್ದೇಗೆಲ್ಲುತ್ತೇವೆ. 

Comments