ಅನ್ನ ಕೊಟ್ಟ ಭಾಷೆ
ಎಂದಿನಂತೆ ನನ್ನ ಯೋಗ ತರಬೇತಿ ಮುಗಿಸಿ ಬರುವಾಗ ನನ್ನ ಗೆಳತಿಗೆ ಇಂದು ಚಿತ್ರಕಲಾ ಪರಿಷತ್ ಗೆ ಹೋಗೋಣವೆಂದರೆ ಯಥಾಪ್ರಕಾರ ನಕಾರವೆ ಬಂದಿದ್ದು, ಹೋಗಲಿ ಹೂಕುಂಡ ತೆಗೆದುಕೊಂಡು ಹೋಗೋಣ ಅಂತ ಹೇಳಿದೆ, ಸರಿ ಎಂದು ಒಪ್ಪಿದರು ಮನೆಯ ಹತ್ತಿರವೇ ಒಂದು ಪುಟ್ಟ ( ಸಸಿಕಟ್ಟುವ ಸ್ಥಳ) ನರ್ಸರಿಗೆ ಹೋದೆವು. ಅಲ್ಲಿ ತರಾವರಿ ಹೂಕುಂಡ ಗಳಿದ್ದವು ಅಲ್ಲಿ ಬಂದಿಳಿದಾಗ ಸುಮಾರು ಇಪ್ಪತ್ತೈದು ವರ್ಷದ ಹುಡುಗ ಹೊರಗೆ ಬಂದ, ನಾನು ಕನ್ನಡ- ಹಿಂದಿ ಅಂತ ಕೇಳಿದೆ... ಏಕೆಂದರೆ ಮಾತನಾಡಲು ಶುರು ಮಾಡಿದಮೇಲೆ ಕನ್ನಡ ಬರಲ್ಲ ಎನ್ನುವವರು ಬಹುಮಂದಿ ಆದ್ದರಿಂದ ಮೊದಲೇ ಖಾತ್ರಿಪಡಿಸಿಕೊಳ್ಳಲು ಕೇಳಿದೆ. ಆ ಹುಡುಗನು ಕನ್ನಡ ಆದರೂ ಪರವಾಗಿಲ್ಲ ಎಂದು ಕನ್ನಡವನ್ನು ಮುತ್ತಿನಂತೆ ಮಾತನಾಡಿದನು, ನಾನು ಕಕ್ಕಾಬಿಕ್ಕಿ. ನನಗೆ ಜನಗಳ ಬಗ್ಗೆ ತಿಳಿಯಲು ಬಲು ಕಾತುರ ಅವನನ್ನು ಉದ್ದೇಶಿಸಿ, ಕನ್ನಡ ಹೇಗೆ ಬರುತ್ತೆ? ನೀನು ಎಲ್ಲಿಂದ ಬಂದಿರುವುದು? ಅಂದಾಗ ನಾನು ಲಕ್ನೋ ಇಂದ ಬಂದಿರುವೆ, ನನ್ನದು ಅಪ್ಪ ಅಮ್ಮ ನಾಲ್ಕು ಜನ ಅಣ್ಣ ತಮ್ಮಂದಿರು ಮತ್ತು ಇಬ್ಬರು ತಂಗಿಯರನ್ನು ಒಡಗೂಡಿದ ಸಂಸಾರ ಐದು ವರ್ಷದಿಂದ ನಾನು ಇಲ್ಲಿ ವ್ಯಾಪಾರದಲ್ಲಿ ತೊಡಗಿರುವ ತಂದೆ ತಾಯಿಗೆ ಹಣವನ್ನು ಕಳಿಸುತ್ತೇನೆ ಎಂದನು. ನಾನು ಅವನನ್ನು ಪ್ರಶಂಸಿಸುತ್ತಾ ಕನ್ನಡ ತುಂಬಾ ಚೆನ್ನಾಗಿ ಮಾತನಾಡುತ್ತಿರುವೆ, ಹೇಗೆ ಎಂದಾಗ, 5 ವರ...