Posts

Showing posts from February, 2020

ನೆನಪುಗಳು ಭಾರವಾದಾಗ-ಅದ್ಯಾಯ ಒಂದು

ಅಮ್ಮನ ಮನೆಯ ಸುತ್ತ ಪುಟ್ಟ ತೋಟ , ಹೂವು , ಗಿಡಮರಗಳು , ಚಿಲಿಪಿಲಿಗುಟ್ಟುವ ಹಕ್ಕಿಗಳು , ಸುಂದರ ಚಿಟ್ಟೆಗಳು , ಅಲ್ಲಿ  ಇರುವ ಕಲ್ಲಿನ ಆಸನ ದಲ್ಲಿ ಕೂತರೆ ಪ್ರಪಂಚವೇ ಮರೆತು ಹೋಗುತ್ತದೆ . ಅಮ್ಮನಿಗೆ ಏನಾದರೂ ಹೇಳಬೇಕೆಂದರೆ ಅಲ್ಲಿಗೆ ಹೋಗಿ ಕುಳಿತು ಮಾತನಾಡುವ ಕ್ರಮ . ಇಂದು ಹಾಗೇ ಕುಳಿತಿರುವಾಗ ಅಮ್ಮ ತನ್ನ ಕಷ್ಟದ ದಿನಗಳನ್ನು ನೆನೆಯುತ್ತಿದ್ದರು . ಹೀಗೆ ತಮ್ಮ ಹಳೆಯ ದಿನಗಳನ್ನು ನೆನೆಯುತ್ತ ನೆಡೆದ ಒಂದು ಘಟನೆ ಮೆಲಕುತ್ತ ಇರಲು , ನನಗೆ ಹೇಳಿದರು ನೀನು ಬರಿ , ಬರೆದಾಗ " ನೆನಪುಗಳು ಭಾರವಾದಾಗ " ಎಂದು ಶೀರ್ಷಿಕೆ ಇಡು ಎಂದರು . ಹೇಳಿ ಬಹಳ ದಿನಗಳೇ ಕಳೆದವು , ಅಮ್ಮನ ಕಹಿ ನೆನಪುಗಳ ಅದ್ಯಾಯ ಪ್ರಾರಂಭ . ಚಿಕ್ಕವಳಿದ್ದಾಗಿನಿಂದ ಅಪ್ಪನ ಆರ್ಭಟ ನೋಡಿ ಭಯವಾಗುತ್ತಿತ್ತು , ಎಂದೂ ತಂದೆಯ ಹತ್ತಿರ ಅಕ್ಕರೆಯಿಂದ ಹೋದ ನೆನಪೇ ಇಲ್ಲ , ಕೋಪ ತಾಂಡವವಾಡುತ್ತಿತ್ತು , ಎಲ್ಲದರಲ್ಲೂ ಅವರದೇ ನಡೆಯಬೇಕಿತ್ತು ಮನೆಯಲ್ಲಿ , ಅದಕ್ಕೆ ಒಂದು ಚಿಕ್ಕ ಉದಾಹರಣೆ ,     ಚಿಕ್ಕವರಿದ್ದಾಗ   ದಾವಣಗೆರೆಯಲ್ಲಿ ಕಾನ್ವೆಂಟ್ ಗೆ ಸೇರಿಸಿದ ಅಪ್ಪ, ಎಂದೂ "ಅಪ್ಪ" "ಅಮ್ಮ" ಎಂದು ಕರಿಯಬಾರದು ಅದರ ಬದಲು "ಡ್ಯಾಡಿ"ಮತ್ತು "ಮಮ್ಮಿ" ಅನ್ನಬೇಕು ಎಂದು, ಅಮ್ಮ ಅಂದಾಗಲೆಲ್ಲ ಅಪ್ಪ ಹೊಡೆದು, ಬೈದು ಡ್ಯಾಡಿ, ಮ...