ತಾಯಿಯ ವಾತ್ಸಲ್ಯ

ತಾಯಿಯ  ವಾತ್ಸಲ್ಯ
ತಾಯಿ ತನ್ನ ಮಗುವನ್ನು ಎಷ್ಟು ಹಚ್ಚಿಕೊoಡಿರುತ್ತಾಳೆ, ಮಗು ಅಮ್ಮ ಆದೊoಡನೆ ಬಿಟ್ಟ ಕೆಲಸ ಬಿಟ್ಟು ಓಡೋಡಿ ಬರುವಳು, ಮಗುವಿನ ನಂತರ ತಾಯಿಯ  ಪ್ರಪಂಚ ಮಗುವೇ ಆಗಿಬಿಡುತ್ತದೆ. ಮಗು ಎಷ್ಟೇ ದೊಡ್ಡದಾದರೂ ಅಮ್ಮನಿಗೆ ಇನ್ನು ಪುಟ್ಟ ಮಗುವೇ, ಹೀಗೆ ನನ್ನ ಗೆಳತಿಯ ಮನೆಗೆ ಹೋದಾಗ ನನ್ನ ಗೆಳತಿ ಹಂಚಿಕೊಂಡ ಕಥೆ, ನನಗೆ ಆಶ್ಚರ್ಯ ವಾದುದೇನೆOದರೆ ನನ್ನ ಗೆಳತಿ ಭಾವನಾತ್ಮಕಳು ಎಂದು ಅಂದೇ ತಿಳಿದದ್ದು.   
ಹೀಗೊಂದು ಅವಳು ಹಂಚಿಕೊಂಡ ಚಿಕ್ಕ ಸಂದರ್ಭ ನಿಮ್ಮ ಮುಂದೆ ಒಂದೆರಡು ಸಾಲುಗಳಲ್ಲಿ
ಮದುವೆಯಾಗಿ ೧೪ ವರುಷಗಳು. ಮುದ್ದಾದ ಹನ್ನೊಂದರ ಹೆಣ್ಣು ಮಗು, ಅಕ್ಕರೆ ತೋರುವ ಪತಿ, ಪ್ರೀತಿಯ ಬಂದು ಬಳಗ, ಮತ್ತೊಂದು ಮಗು ಬೇಕೆಂದು ಎಂದು ಯೋಚನೆ ಬಂದಿರಲಿಲ್ಲ  ಕೆಲವೊಮ್ಮೆ ಅನ್ನಿಸಿದರೂ ಆ ಕಡೆ ತಲೆ ಹೋಗಿರಲಿಲ್ಲ, ಸಂಸಾರ ಸಾಗಿತ್ತು. ದಸರಾ ರಾಜ ದಿನಗಳು ಎಂದಿನಂತೆ ಪ್ರಯಾಣದ ಸಿದ್ದತೆ, ಪ್ರಯಾಣದ ಸಂಭ್ರಮದಲ್ಲಿ ನನ್ನ ರಜೆ ದಿನಗಳು ಮುಂದು ಹೋಗಿರುವ ಬಗ್ಗೆ ತಲೆ ಕೊಡಲಿಲ್ಲ, ಐದು ದಿನಗಳ ನಂತರ ಒಮ್ಮೆ ತಲೆಯಲ್ಲಿ ಮಿಂಚಂತೆ ಹಾರಿತು, ಈ ತಿಂಗಳು ನನ್ನ ಋತುಚಕ್ರ ಮುಂದು ಹೋಗಿರುವುದು ನೆನಪಾಯಿತು.
ಪತಿರಾಯರಿಗೆ ಹೇಳಲೋ ಬೇಡವೋ ಗೊತ್ತಾಗಲಿಲ್ಲ, ಹೇಗಾದರೂ ಆಗಲಿ ಹೇಗಾದರೂ ಆಗಲಿ ಮಾರುಕಟ್ಟೆಗೆ ಹೋಗಿ
ಗರ್ಭಧಾರಣೆಯ ಪರೀಕ್ಷಾ ಕಿಟ್ ತಂದು ಪರಿಶೀಸಲೆಂದು ತಯಾರಾದೆ, ಮರುದಿನ ಬೆಳಗಿನ ಜಾವಾ, ಪರೀಕ್ಷೆ ಮಾಡಿಕೊಂಡ ನಂತರ ಎದೆಬಡಿತ ಏರಿತು, ಫಲಿತಾಂಶ ಖಚಿತವಾದಾಗ ಅದು ತಪ್ಪಾಗಿರಲೆಂದು ಮನಸ್ಸು ಬಯಸುತಿತ್ತು.
ರೀ ರೀ ......ಪತಿರಾಯರನ್ನು ಕರೆದು ವಿಷಯ ತಿಳಿಸಿದೆ, ಸರಿಯಾಗಿ ತೋರಿಸಿರುವೆಯ ಎಂದು ಕೇಳಿದರು, ಮತ್ತೊಮ್ಮೆ ಹತ್ತಿರದಲ್ಲಿರುವ ಖಾಸಾಗಿ ಆಸ್ಪತ್ರೆಗೆ ಹೋಗಿ ತೋರಿಸು ಎಂದರು. ಆಸ್ಪತ್ರಿಗೆ ಹೋಗಿ ಮತ್ತೆ ರಿಪೋರ್ಟ್ ತೋರಿಸಿದ ನಂತರ ಅದೇ ಆಸ್ಪತ್ರೆಗೆ ಹೋಗಿ ತೆಗೆಸಿಬಿಡಮ್ಮ ಅಂದರು, ಆಳಲೋ, ನಗಲೋ ಗೊತ್ತಾಗದೆ ಬೆಪ್ಪಾಗಿ ಕುಳಿತೆ,ಹತ್ತಾರು ಯೋಚನೆಗಳು ಮನದಲ್ಲಿ, ಆ ದಿನ ಕಳೆಯಿತು, ಮರುದಿನ ಅದೇ ಆಸ್ಪತ್ರೆಗೆ ಹೋಗಿ ಆಪಾಯಿಂಟ್ಮೆಂಟ್ ತೆಗೆದುಕೊಂಡು, ಡಾಕ್ಟರ್ ಕೇಳಿದರು, ನಿನ್ನ ಪತಿಯ ಒಪ್ಪಿಗೆ ಇದೆಯಾ ಎಂದರು, ಹೂಗುಟ್ಟಿದೆ. ಡಾಕ್ಟರ್ ಪರೀಕ್ಷಿಸಿ ಹೇಳಿದರು ಪ್ರೊಸೀಜರ್ ಬೇಡ, ಎರಡು ಮಾತ್ರೆ ಬರೆದು ಕೊಡುವೆ ತೆಗೆದು ಕೊಂಡು, ಒಂದು ವಾರದ ನಂತರ  ಬಂದು ತೋರಿಸಿ ಅಂದರು.
ಮರುದಿನ ಮಾತ್ರೆ ತೆಗೆದುಕೊಂಡಾಗ ಏನೋ ತಪ್ಪು ಮಾಡಿದ ಭಾವನೆ, ಏನು ಕೆಲ ಮಾಡಲಿಕ್ಕೆ ಮನಸಿಲ್ಲ, ನನ್ನ ಪರಿಸ್ಥಿತಿ ನೋಡಿ ನನ್ನ ಪತಿರಾಯರು ಸಿನೆಮಾಗೆ ಕರೆತಂದರು.
ಸಿನೆಮಾ ದಲ್ಲೂ, ಮಗುವು ತಂದೆ ತಾಯಿಗೆ ಪರಿತಪಿಸುತ್ತಿರುವ ದೃಶ್ಯ, ಮಧ್ಯಂತರದಲ್ಲಿ ಕಾಫಿ ತರೋಣವೆಂದು ಹೊರಗೆ ಬಂದಾಗ ಯಾವುದೊ ಮಗು ಅಮ್ಮ ಅಂತ ನನ್ನ ಕೈ ಹಿಡಿದು ಕೊಂಡಿತು, ಎದೆ ದಸಕ್ ಎಂದಿತು, ಏಕೋ ತಪ್ಪು ಮಾಡಿದ ಭಾವನೆ ಕಣ್ಣಲ್ಲಿ ನೀರು ತುಂಬಿತು, ನನ್ನ ಆಸನಕ್ಕೆ ಬಂದು ಕುಳಿತೆ, ಮತ್ತೆ ದುಃಖ ತಡೆಯಲಾರದೆ ಅಳಲು, ಇವರು ಏನಿದು ನಿನ್ನನ್ನ ಇಲ್ಲಿಗೆ ಕರೆತಂದದ್ದು ನೀನು ಸಂತೋಷವಾಗಿರಲೆಂದು, ಅಳಬೇಡ.....
ಹೀಗೆ ಒಂದು ವಾರ, ಒಂದು ತಿಂಗಳು ಕಳೆಯಿತು, ಮತ್ತೆ ಜೀವನ ಸಾಗಿತು........ಒಮ್ಮೊಮ್ಮೆ ನೆನಪಾಗುತ್ತದೆ.........

Comments