Posts

Showing posts from January, 2020

ತಾಯಿಯ ವಾತ್ಸಲ್ಯ

ತಾಯಿಯ  ವಾತ್ಸಲ್ಯ ತಾಯಿ ತನ್ನ ಮಗುವನ್ನು ಎಷ್ಟು ಹಚ್ಚಿಕೊoಡಿರುತ್ತಾಳೆ, ಮಗು ಅಮ್ಮ ಆದೊoಡನೆ ಬಿಟ್ಟ ಕೆಲಸ ಬಿಟ್ಟು ಓಡೋಡಿ ಬರುವಳು, ಮಗುವಿನ ನಂತರ ತಾಯಿಯ  ಪ್ರಪಂಚ ಮಗುವೇ ಆಗಿಬಿಡುತ್ತದೆ. ಮಗು ಎಷ್ಟೇ ದೊಡ್ಡದಾದರೂ ಅಮ್ಮನಿಗೆ ಇನ್ನು ಪುಟ್ಟ ಮಗುವೇ, ಹೀಗೆ ನನ್ನ ಗೆಳತಿಯ ಮನೆಗೆ ಹೋದಾಗ ನನ್ನ ಗೆಳತಿ ಹಂಚಿಕೊಂಡ ಕಥೆ, ನನಗೆ ಆಶ್ಚರ್ಯ ವಾದುದೇನೆOದರೆ ನನ್ನ ಗೆಳತಿ ಭಾವನಾತ್ಮಕಳು ಎಂದು ಅಂದೇ ತಿಳಿದದ್ದು.    ಹೀಗೊಂದು ಅವಳು ಹಂಚಿಕೊಂಡ ಚಿಕ್ಕ ಸಂದರ್ಭ ನಿಮ್ಮ ಮುಂದೆ ಒಂದೆರಡು ಸಾಲುಗಳಲ್ಲಿ ಮದುವೆಯಾಗಿ ೧೪ ವರುಷಗಳು. ಮುದ್ದಾದ ಹನ್ನೊಂದರ ಹೆಣ್ಣು ಮಗು, ಅಕ್ಕರೆ ತೋರುವ ಪತಿ, ಪ್ರೀತಿಯ ಬಂದು ಬಳಗ, ಮತ್ತೊಂದು ಮಗು ಬೇಕೆಂದು ಎಂದು ಯೋಚನೆ ಬಂದಿರಲಿಲ್ಲ  ಕೆಲವೊಮ್ಮೆ ಅನ್ನಿಸಿದರೂ ಆ ಕಡೆ ತಲೆ ಹೋಗಿರಲಿಲ್ಲ, ಸಂಸಾರ ಸಾಗಿತ್ತು. ದಸರಾ ರಾಜ ದಿನಗಳು ಎಂದಿನಂತೆ ಪ್ರಯಾಣದ ಸಿದ್ದತೆ, ಪ್ರಯಾಣದ ಸಂಭ್ರಮದಲ್ಲಿ ನನ್ನ ರಜೆ ದಿನಗಳು ಮುಂದು ಹೋಗಿರುವ ಬಗ್ಗೆ ತಲೆ ಕೊಡಲಿಲ್ಲ, ಐದು ದಿನಗಳ ನಂತರ ಒಮ್ಮೆ ತಲೆಯಲ್ಲಿ ಮಿಂಚಂತೆ ಹಾರಿತು, ಈ ತಿಂಗಳು ನನ್ನ ಋತುಚಕ್ರ ಮುಂದು ಹೋಗಿರುವುದು ನೆನಪಾಯಿತು. ಪತಿರಾಯರಿಗೆ ಹೇಳಲೋ ಬೇಡವೋ ಗೊತ್ತಾಗಲಿಲ್ಲ, ಹೇಗಾದರೂ ಆಗಲಿ ಹೇಗಾದರೂ ಆಗಲಿ ಮಾರುಕಟ್ಟೆಗೆ ಹೋಗಿ ಗರ್ಭಧಾರಣೆಯ ಪರೀಕ್ಷಾ ಕಿಟ್ ತಂದು ಪರಿಶೀಸಲೆಂದು ತಯಾರಾದೆ, ಮರುದಿನ ಬೆಳಗಿನ ಜಾವಾ, ಪರೀಕ್ಷೆ ಮಾಡಿಕೊಂಡ ನಂತರ ಎದ...